1) 1. ಪದಗಳೆರಡು ಸಂಸ್ಕೃತ ಪದಗಳಾಗಿದ್ದು, ಪೂರ್ವಪದ ಮತ್ತು ಉತ್ತರ ಪದಗಳೆರಡರಲ್ಲೂ ವ್ಯಂಜನವಿದ್ದು ಅಥವಾ ಇವುಗಳಲ್ಲಿ ಒಂದು ಪದ ವ್ಯಂಜನವಾಗಿದ್ದು ಸಂಧಿಯಾದರೇ ಆ ಸಂಧಿಯನ್ನು ---------- ಎನ್ನುವರು. a) ಸಂಸ್ಕೃತ ಸ್ವರ ಸಂಧಿ b) ಕನ್ನಡ ವ್ಯಂಜನ ಸಂಧಿ c) ವ್ಯಂಜನ ‌ಸಂಧಿ d) ಸಂಸ್ಕೃತ ವ್ಯಂಜನ ಸಂಧಿ 2) 2. ನಮಗೆ ಅಭ್ಯಾಸಕ್ಕಿರುವ ಸಂಸ್ಕೃತ ವ್ಯಂಜನ ಸಂಧಿಗಳು ಇವು; a) ಜಶ್ತ್ವ, ಶ್ಚುತ್ವ, ಅನುನಾಸಿಕ b) ಗುಣ, ಯಣ್, ಜಶ್ತ್ವ c) ಲೋಪ, ಆಗಮ, ಆದೇಶ d) ಆದೇಶ, ಜಶ್ತ್ವ, ಶ್ಚುತ್ವ, ಅನುನಾಸಿಕ 3) ನಮಗೆ ಅಭ್ಯಾಸಕ್ಕಿರುವ ಸಂಸ್ಕೃತ ವ್ಯಂಜನ‌ಸಂಧಿಗಳ ಸಂಖ್ಯೆ------- a) 4 b) 3 c) 2 d) 5 4) 4. ಪೂರ್ವಪದದ ಅಂತ್ಯದಲ್ಲಿ ವರ್ಗ ಪ್ರಥಮಾಕ್ಷರಗಳಾದ ಕ್ ಚ್ ಟ್ ತ್ ಪ್ ಗಳು ಬಂದು, ಉತ್ತರ ಪದದ ಆರಂಭದಲ್ಲಿ ಯಾವುದೇ ಅಕ್ಷರ ಪರವಾದರೂ , ಪೂರ್ವ ಪದಾಂತ್ಯದ ಕ್ ಚ್ ಟ್ ತ್ ಪ್ ಗಳಿಗೆ ಕ್ರಮವಾಗಿ ಗ್ ಜ್ ಡ್ ದ್ ಬ್ ಗಳು ಆದೇಶವಾಗಿ ಬರುವವು. ಈ ಸಂಧಿಯನ್ನು ----- ಸಂಧಿ ಎನ್ನುವರು. a) ಅನುನಾಸಿಕ b) ವಿಸರ್ಗ c) ಶ್ಚುತ್ವ d) ಜಶ್ತ್ವ 5) 5. ದಿಕ್+ಅಂತ= ದಿಗಂತ( 'ಕ್' ಗೆ 'ಗ್' ಆದೇಶ), ಅಚ್+ಅಂತ= ಅಜಂತ( 'ಚ್' ಗೆ 'ಜ್' ಆದೇಶ), ಷಟ್+ ಆನನ= ಷಡಾನನ( 'ಟ್'ಗೆ 'ಡ್' ಆದೇಶ), ಸತ್+ ಆನಂದ= ಸದಾನಂದ('ತ್' ಗೆ 'ದ್' ಆದೇಶ), ಅಪ್+ ಧೀ= ಅಬ್ಧೀ ('ಪ್'ಗೆ 'ಬ್' ಆದೇಶ) ಇವು ----- ಸಂಧಿಗೆ ಉದಾಹರಣೆ. a) ಶ್ಚುತ್ವ b) ಅನುನಾಸಿಕ c) ಜಶ್ತ್ವ d) ವಿಸರ್ಗ 6) 6. ಜಶ್ತ್ವಸಂಧಿ ಮತ್ತು ಆದೇಶ ಸಂಧಿಗಳ ಮಧ್ಯೆ ಇರುವ ಭಿನ್ನತೆಯನ್ನು ಸುಲಭವಾಗಿ ಹೀಗೆ ಗುರುತಿಸಬಹುದು; a) ಆದೇಶ ಸಂಧಿ ಕನ್ನಡ ವ್ಯಂಜನ ಸಂಧಿಯಾದರೇ, ಜಶ್ತ್ವ ಸಂಧಿ ಸಂಸ್ಕೃತ ವ್ಯಂಜನ ಸಂಧಿಯಾಗಿದೆ. b) ಜಶ್ತ್ವ ಸಂಧಿಯಲ್ಲಿ ಪೂರ್ವ ಪದಾಂತ್ಯದಲ್ಲಿ ಆದೇಶ ಕಾರ್ಯ ನಡೆದರೆ , ಆದೇಶ ಸಂಧಿಯಲ್ಲಿ ಉತ್ತರ ಪದದ ಆರಂಭದಲ್ಲಿ ಆದೇಶ ಕಾರ್ಯ ನಡೆಯುತ್ತದೆ. c) 'ಜಶ್' ಎಂಬುದು ಗ ಜ ಡ ದ ಬ ಶಗಳನ್ನು ಸಂಕೇತಿಸುತ್ತದೆ. d) ಜಶ್ತ್ವ ಸಂಧಿಯಲ್ಲಿ ಪೂರ್ವ ಪದಾಂತ್ಯದ ವವ್ಯಂಜನದ ಮುಂದೆ ಸ್ವರ ಬಂದು ಸಂಧಿಯಾದರೆ, ಆದೇಶ ಸಂಧಿಯಲ್ಲಿ ಸಾಮಾನ್ಯವಾಗಿ ಸ್ವರದ ಮುಂದೆ ವ್ಯಂಜನ ಬಂದು ಸಂಧಿಯಾಗುತ್ತದೆ. 7) 7. ' ಶ್ಚುತ್ವ' ಎಂದರೆ --------- a) 'ಚ' ವರ್ಗಾಕ್ಷರಗಳು b) ಶ್, ತ್, ವ್ ಗಳು c) 'ಶ್' ಕಾರ 'ಚ' ವರ್ಗಾಕ್ಷರಗಳು d) 'ಸ್' ಕಾರ 'ತ' ವರ್ಗಾಕ್ಷರಗಳು. 8) 8. ಪೂರ್ವ ಪದದ ಅಂತ್ಯದಲ್ಲಿರುವ 'ಸ' ಕಾರ 'ತ' ವರ್ಗಾಕ್ಷರಗಳೊಡನೆ ಉತ್ತರ ಪದದ ಆದಿಯಲ್ಲಿರುವ 'ಶ' ಕಾರ 'ಚ' ವರ್ಗಾಕ್ಷರಗಳು ಸೇರಿ ಸಂಧಿಯಾದಾಗ ಪೂರ್ವ ಪದದ ಅಂತ್ಯದಲ್ಲಿರುವ 'ಸ' ಕಾರ ' ತ' ವರ್ಗಕ್ಕೆ ಕ್ರಮವಾಗಿ 'ಶ 'ಕಾರ 'ಚ' ವರ್ಗಾಕ್ಷರಗಳು ಆದೇಶವಾಗಿ ಬರುವವು. ಈ ಸಂಧಿಯು ------- ಸಂಧಿಯಾಗಿದೆ.  a) ಶ್ಚುತ್ವ b) ಜಶ್ತ್ವ c) ವಿಸರ್ಗ d) ಅನುನಾಸಿಕ 9) ಇವುಗಳಲ್ಲಿ ಶ್ಚುತ್ವ ಸಂಧಿಗೆ ಉದಾಹರಣೆಯಾದ ಪದಗಳ ಗುಂಪು -------  a) ಅತ್ಯಂತ, ಗುರ್ವಾಜ್ಞೆ, ಮಾತೃಂಶ b) ವಾಙ್ಮಯ, ಷಣ್ಮಾಸ, ಉನ್ಮಾದ c) ದಿಗಂತ, ಅಜಂತ, ಚಿದಾನಂದ d) ಪಯಶ್ಯಯನ, ಸಚ್ಚಿತ್ರ, ತಜ್ಜಾತಿ 10) ಮನಸ್+ ಶಾಂತಿ = ಮನಶ್ಯಾಂತಿ( 'ಸ್'ಗೆ 'ಶ್' ಆದೇಶ), ಸತ್+ ಚಿತ್ರ= ಸಚ್ಚಿತ್ರ( 'ತ್'ಗೆ 'ಚ್' ಆದೇಶ), ಜಗತ್+ ಜ್ಯೋತಿ= ಜಗಜ್ಜ್ಯೋತಿ( 'ತ್'ಗೆ 'ಜ್' ಆದೇಶ) ಈ ಸಂಧಿಗಳು ----- ಸಂಧಿಗೆ ಉದಾಹರಣೆಯಾಗಿವೆ. a) ಜಶ್ತ್ವ b) ಅನುನಾಸಿಕ c) ಶ್ಚುತ್ವ d) ಯಣ್

ಪ್ರ‌. ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ : ಸಂಧಿಗಳು ಭಾಗ-೫ - ಶ್ರೀ ವಿಷ್ಣು ಆರ್‌. ನಾಯ್ಕ, ಸ.ಪ್ರೌ. ಶಾಲೆ ಜಿಡ್ಡಿ, ಸಿದ್ದಾಪುರ.

Theme

Options

Leaderboard

Switch template

Interactives

Restore auto-saved: ?