1) ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ವ್ಯಂಜನಗಳ ಸಂಖ್ಯೆ ಎಷ್ಟು? a) ೩೪ b) ೧೩ c) ೪೯ d) ೨೫ 2) ಅಂಕಿತನಾಮಕ್ಕೆ ಉದಾಹರಣೆ ಈ ಪದವಾಗಿದೆ? a) ಸಮುದ್ರ b) ಸಹದೇವ c) ವ್ಯಾಪಾರಿ d) ಪರ್ವತ 3) ಹೊಸಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ ಯಾವುದು? a) ಅನ್ನು b) ಅಲ್ಲಿ c) ದೆಸೆಯಿಂದ d) ಗೆ 4) ಈ ಕೆಳಗಿನವುಗಳಲ್ಲಿ ಅನುಕರಣಾವ್ಯಯ ಯಾವುದು? a) ತುತ್ತ ತುದಿ b) ಮೊಟ್ಟಮೊದಲು c) ಚಟ ಚಟ d) ಹಣ್ಣು ಹಂಪಲು 5) ಈ ಕೆಳಗಿನವುಗಳಲ್ಲಿ ಲೋಪಸಂಧಿಗೆ ಉದಾಹರಣೆ ಯಾವುದು? a) ದೇವಾಲಯ b) ಮಹರ್ಷಿ c) ಮನೆಯಲ್ಲಿ d) ಊರೂರು 6) ಬೆಟ್ಟದಾವರೆ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ? a) ತತ್ಪುರುಷ ಸಮಾಸ b) ಕರ್ಮಧಾರೆಯ ಸಮಾಸ c) ದ್ವಿಗು ಸಮಾಸ d) ಅಂಶಿ ಸಮಾಸ 7) ಪ್ರಸಾದ ಪದದ ತದ್ಭವ ರೂಪ ಯಾವುದು? a) ಹಸಾದ b) ತಿಂಡಿ c) ಭಿನ್ನಾಣ d) ದಿಟ್ಟಿ 8) ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಹೇಳುವಾಗ ಬಳಸುವ ಚಿಹ್ನೆ ಯಾವುದು? a) ವಾಕ್ಯವೇಷ್ಟನ b) ಉದ್ದರಣ c) ಅಲ್ಪವಿರಾಮ d) ಆವರಣ 9) ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು. ಈ ವಾಕ್ಯದಲ್ಲಿರುವ ಅಲಂಕಾರ ಯಾವುದು? a) ಉತ್ಪ್ರೇಕ್ಷೆ b) ರೂಪಕ c) ಉಪಮಾ d) ದೃಷ್ಟಾಂತ 10) ಕಂದಪದ್ಯ : ನಾಲ್ಕು ಸಾಲು : : ಷಟ್ಪದಿ : ________ a) ೩ ಸಾಲು b) ೬ ಸಾಲು c) ೪ ಸಾಲು d) ೮ ಸಾಲು

SSSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ದತೆ ಭಾಗ ೧ (ಶ್ರೀನಿವಾಸನಾಯ್ಡು ಸ.ಪ್ರೌ.ಶಾಲೆ. ಭೈರನತ್ತ, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.)

Scorebord

Visuele stijl

Opties

Template wisselen

Automatisch opgeslagen activiteit "" herstellen?