1) ಎ ಎನ್ ಮೂರ್ತಿರಾವ್ ಅವರ ಜನ್ಮಸ್ಥಳ ಯಾವುದು? a) ಮೈಸೂರು ಜಿಲ್ಲೆಯ ಹೆಬ್ಬಾಳು b) ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು c) ಕೊಡಗು ಜಿಲ್ಲೆ ಸೋಮವಾರಪೇಟೆ  d) ಉಡುಪಿ ಜಿಲ್ಲೆಯ ಕೋಟಾ 2) ಎ ಎನ್ ಮೂರ್ತಿರಾವ್ ಅವರ ಜನನ ವರ್ಷ ___ a) 1900 b) 1905 c) 1907 d) 1926 3) ಎ ಎನ್ ಮೂರ್ತಿರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು? a) ಹಗಲುಗನಸುಗಳು b) ಮಿನುಗುಮಿಂಚು c) ಚಿತ್ರಗಳು ಪತ್ರಗಳು d) ಅಲೆಯುವ ಮನ 4) ಎ ಎನ್ ಮೂರ್ತಿರಾವ್ ಅವರ ದೇವರು ಎಂಬ ಕೃತಿಗೆ ಲಭಿಸಿದ ಪ್ರಶಸ್ತಿ ಯಾವುದು? a) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  b) ಜ್ಞಾನಪೀಠ ಪ್ರಶಸ್ತಿ c) ನೃಪತುಂಗ ಪ್ರಶಸ್ತಿ d) ಪಂಪ ಪ್ರಶಸ್ತಿ 5) ಭಗವದ್ಗೀತೆಯನ್ನು ರಚಿಸಿದವರು ಯಾರು? a) ಕುಮಾರವ್ಯಾಸರು b) ವೇದವ್ಯಾಸರು c) ನೃಪತುಂಗ  d) ಪಂಪ 6) ವ್ಯಾಘ್ರಗೀತೆ ಎಂಬ ಪದ್ಯವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ? a) ಕಾದಂಬರಿ b) ಪ್ರವಾಸ ಕಥನ c) ಲಲಿತ ಪ್ರಬಂಧ d) ಆತ್ಮಕಥನ 7) ವ್ಯಾಘ್ರಗೀತೆ ಗದ್ಯಭಾಗದ ಆಕರ ಕೃತಿ ಯಾವುದು? a) ಹಗಲುಗನಸುಗಳು b) ಮಿನುಗುಮಿಂಚು c) ಚಿತ್ರಗಳು ಪತ್ರಗಳು d) ಸಮಗ್ರ ಲಲಿತ ಪ್ರಬಂಧಗಳು. 8) ಖಿರ್ದಿ ಪುಸ್ತಕ ಎಂದರೆ____ a) ಕಿರಿದಾದ ಪುಸ್ತಕ b) ದೈನಂದಿನ ಕೆಲಸಗಳ ವಿವರ ಹೊಂದಿರುವ ಪುಸ್ತಕ c) ದಿನದ ಕೆಲಸಗಳನ್ನು ನೆನಪಿಸುವ ಪುಸ್ತಕ d) ಕಂದಾಯದ ವಿವರಗಳನ್ನು ಹೊಂದಿರುವ ಪುಸ್ತಕ 9) ಮಸಿ ಕಾಣಿಕೆ ಎಂದರೇನು? a) ಕಪ್ಪು ಹಣ b) ರೈತರಿಂದ ಕಂದಾಯವಲ್ಲದೆ ವಸೂಲಿ ಮಾಡುವ ಹೆಚ್ಚಿನ ಹಣ c) ಬಣ್ಣವನ್ನು ಖರೀದಿಸಲು ಬೇಕಾದ ಹಣ d) ದೇವರ ಹುಂಡಿಗೆ ಹಾಕುವ ಹಣ 10) ಘ್ರಾಣೇಂದ್ರಿಯ ಎಂದರೆ____________ a) ಮೂಗು b) ಕಿವಿ c) ನಾಲಿಗೆ d) ಚರ್ಮ 11) ಕುಲಾಲಚಕ್ರ ಎಂದರೇನು? a) ಆಹಾರ ಸರಪಳಿ b) ಗಾಡಿಗಳಲ್ಲಿ ಬಳಸುವ ಚಕ್ರ c) ಕುಂಬಾರನು ಮಡಿಕೆ ಮಾಡುವಾಗ ಬಳಸುವ ಚಕ್ರ d) ವಿಷ್ಣುವಿನ ಕೈಲ್ಲಿರುವ ಚಕ್ರ 12) ಇರಸಾಲು ಎಂದರೇನು? a) ಇರುವೆಗಳ ಸಾಲು b) ಇಕ್ಕಟ್ಟಾದ ಸಾಲು c) ಶೈಕ್ಷಣಿಕ ವರ್ಷ d) ರೈತರಿಂದ ವಸೂಲಿ ಮಾಡಿದ ಕಂದಾಯವನ್ನು ಖಜಾನೆಗೆ ಕಟ್ಟುವುದು. 13) ಲೇಖಕರು ಯಾವ ಪ್ರಾಣಿಗೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ ಎನ್ನುತ್ತಾರೆ? a) ಬೆಕ್ಕು b) ನಾಯಿ c) ಚಿರತೆ d) ಜಿಂಕೆ 14) ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದು? a) ಹೆಗಲ ಮೇಲಿದ್ದ ಶಾಲು b) ಖಿರ್ದಿ ಪುಸ್ತಕ c) ದಿನಚರಿ d) ಬಾವುಟ 15) ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಏಕೆ ಹೋಗಿದ್ದರು? a) ಗೆಳೆಯರನ್ನು ನೋಡಲು  b) ಇರಸಾಲಿಗಾಗಿ c) ಹುಲಿಯನ್ನು ನೋಡಲು d) ಹುಲಿಯನ್ನು ಬೇಟೆಯಾಡಲು 16) ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಯಾವ ಕಣಿವೆಯನ್ನು ದಾಟಿ ಹೋಗಬೇಕು? a) ಮದಲಿಂಗನ ಕಣಿವೆ b) ಮಾರಿಕಣಿವೆ c) ಕೃಷ್ಣಾ ಕಣಿವೆ  d) ಕಾವೇರಿ ಕಣಿವೆ 17) ಶಾನುಭೋಗರ ಕಾಲು ಮತ್ತಷ್ಟು ಚುರುಕಾಗಲು ಕಾರಣ____________ a) ಹಸಿವಿನೊಂದಿಗೆ ಭಯವೂ ಸೇರಿ b) ಹುಲಿಯಿಂದ ತಪ್ಪಿಸಿಕೊಳ್ಳಲು c) ಮರ ಹತ್ತಲು d) ಚಿಕ್ಕನಾಯಕನಹಳ್ಳಿಗೆ ಹೋಗಲು 18) ಹುಲಿ ಎಲ್ಲಿ ಮಲಗಿತ್ತು? a) ರಸ್ತೆಯ ಪಕ್ಕದಲ್ಲಿದ ಗುಹೆಯಲ್ಲಿ  b) ಮರದ ಮೇಲೆ c) ಮದಲಿಂಗನ ಕಣಿವೆಯಲ್ಲಿ d) ರಸ್ತೆಯಲ್ಲಿ 19) ಹಸಿದು ಮಲಗಿದ್ದ ಹುಲಿಯೂ ಏನೆಂದು ಯೋಚಿಸಿತು? a) ವಿದಿ ಆಹಾರಕ್ಕಾಗಿ ಕೆಂಪಾದ ದುಂಡಾದ ಮನುಷ್ಯನನನು ಕೊಡಲಿ ಎಂದು ಯೋಚಿಸಿತು b) ವಿದಿ ಆಹಾರಕ್ಕಾಗಿ ಏನನ್ನು ಕೊಡುವುದು ಎಂದು ಯೋಚಿಸಿತು c) ವಿದಿ ಆಹಾರಕ್ಕಾಗಿ ಶಾನುಭೋಗರನ್ನೇ ಕಳುಹಿಸಲಿ ಎಂದು ಯೋಚಿಸಿತು d) ವಿದಿ ಆಹಾರಕ್ಕಾಗಿ ಹೆಚ್ಚು ಪ್ರಾಣಿಗಳನ್ನು ಕರುಣಿಸಲಿ ಎಂದು ಯೋಚಿಸಿತು 20) ಹುಲಿಯ ಘ್ರಾಣೇಂದ್ರಿಯವನ್ನು ಆಕ್ರಮಿಸಿದ ಗಂಧ ಯಾವುದು? a) ಶ್ರೀಗಂಧದ ವಾಸನೆ b) ಕಾಡಿನಲ್ಲಿ ಸತ್ತ ಪ್ರಾಣಿಯ ದುರ್ಗಂಧ c) ಶಾನುಭೊಗರ ದೇಹದ ಮದುರವಾದ ಗಂಧ d) ಶಾನುಭೋಗರ ಚೀಲದಲ್ಲಿದ್ದ ತಿಂಡಿಗಳ ಗಂಧ 21) ಹುಲಿಗೆ ಪರಮಾನಂದವಾಗಲು ಕಾರಣವೇನು? a) ಖಿರ್ದಿ ಪುಸ್ತಕ ನೋಡಿ b) ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ c) ಶಾನುಭೋಗರು ಬೆನ್ನು ತಿರುಗಿಸಿ ನಡೆಯುತ್ತಿರುವುದನ್ನು ನೋಡಿ d) ಎತ್ತುಗಳ ಘಂಟೆ ಶಬ್ಧ ಕೇಳಿ 22) ಹುಲಿ ನಿರಾಶೆಯಾಗಲು ಕಾರಣವೇನು ? a) ಹುಲಿ ಬಯಸಿದ ಪ್ರಾಣಿ ಸಿಗದಿರುವುದು b) ಆಹಾರಕ್ಕಾಗಿ ಏನೂ ಸಿಗದಿರುವುದು c) ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ d) ಶಾನುಭೋಗರು ಬೆನ್ನು ತಿರುಗಿಸಿ ನಡೆಯುತ್ತಿರುವುದನ್ನು ನೋಡಿ 23) ಹುಲಿಯ ಬಡ ಬಂದು ಯಾರು? a) ಬೆಕ್ಕು b) ನಾಯಿ c) ಚಿರತೆ d) ಜಿಂಕೆ 24) ಶಾನುಭೋಗರಿಗೆ ಹುಲಿ ಬಂದಿದ್ದು ಹೇಗೆ ತಿಳಿಯಿತು? a) ಹುಲಿಯ ಘರ್ಜನೆಯಿಂದ b) ಆರನೆಯ ಇಂದ್ರಿಯದಿಂದ c) ಹುಲಿಯ ವಾಸನೆಯಿಂದ d) ಗಾಡಿಯವರು ಹೇಳಿದ್ದರಿಂದ 25) ಪ್ರಸ್ತುತ ಗದ್ಯಭಾಗದಲ್ಲಿ ಹೆಸರಿಸಿರುವ ಹುಲಿಯ ಪೂರ್ವಜರು ಯಾರು? a) ಪುಣ್ಯಕೋಟಿ ಕಥೆಯಲ್ಲಿ ಬರುವ ಹುಲಿ b) ಬಂಡೀಪುರ ಸಂರಕ್ಷಿತ ಅರಣ್ಯದಲ್ಲಿರುವ ಹುಲಿ c) ಮೈಸೂರಿನ ಮೃಗಾಲಯದಲ್ಲಿರುವ ಹುಲಿ d) ಯಾರೂ ಅಲ್ಲ 26) ಖಂಡವಿದೆ ಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆ ಕೋ ಎಂದು ಹುಲಿಯ ಅಜ್ಜನಿಗೆ ಆಹ್ವಾನ ಕೊಟ್ಟವರು ಯಾರು? a) ಗಂಗೆ b) ಗೌರಿ c) ಪುಣ್ಯಕೋಟಿ d) ಕಾಮಧೇನು 27) ಶಾನುಭೋಗರ ತಲೆ ಸುತ್ತಲು ಕಾರಣವೇನು? a) ಶಾನುಭೋಗರಿಗೆ ತುಂಬಾ ಹೊಟ್ಟೆ ಹಸಿದಿದ್ದರಿಂದ b) ಶಾನುಭೋಗರು ನಿಂತಲ್ಲಿಯೇ ಕುಲಾಲ ಚಕ್ರದಂತೆ ತಿರುಗುತ್ತದ್ದರಿಂದ c) ಶಾನುಭೋಗರನ್ನು ಹುಲಿಯು ಎಳೆದಾಡಿದ್ದರಿಂದ d) ಶಾನುಭೋಗರು ಮರದಿಂದ ಬಿದ್ದರು ಅದರಿಂದ 28) ಪಂಜಾ ಎಂದರೆ ______________________ a) ತೆಂಗಿನ ಗರಿಯ ಪಂಜು b) ಪೊರಕೆ c) ಹುಲಿಯ ಉಗುರು d) ಜಮಖಾನೆ 29) ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ ಎಂದುಕೊಂಡವರು ಯಾರು ? a) ಎ ಎನ್‌ ಮೂರ್ತಿರಾವ್‌  b) ಕೃಷ್ಣಮೂರ್ತಿ c) ಶಾನುಭೋಗರು d) ಪುಣ್ಯಕೋಟಿ 30) ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ? a) ಹೆಗಲ ಮೇಲಿದ್ದ ಶಾಲು b) ಬಾವುಟ c) ದಿನಚರಿ d) ಖಿರ್ದಿ ಪುಸ್ತಕ 31) ವ್ಯಾಘ್ರಗೀತೆ ಕಥೆಯ ಕಥಾನಾಯಕರು ಯಾರು? a) ಹುಲಿ b) ಶಾನುಭೋಗರು c) ಕೃಷ್ಣಮೂರ್ತಿ d) ಎ ಎನ್‌ ಮೂರ್ತಿರಾಯರು 32) ಖಿರ್ದಿ ಪುಸ್ತಕವನ್ನು ಹುಲಿಯ ಮೇಲೆಸೆದು ದೇವರೆ ಮರ ಹತ್ತುವಷ್ಡು ಅವಕಾಶ ಕರುಣಿಸು ಎಂದು ಶಾನುಭೊಗರು ಓಡುವಾಗ ಮುಂದೆ ಏನಾಯಿತು ? a) ಶಾನುಭೋಗರು ಮರ ಹತ್ತಿದರು b) ಶಾನುಭೋಗರು ಮೇಲೆ ಎದ್ದಿದ್ದ ಕಲ್ಲನ್ನು ಎಡವಿ ಬಿದ್ದರು c) ಶಾನುಭೋಗರ ಮೇಲೆ ಹುಲಿ ನೆಗೆಯಿತು d) ಗಾಡಿಯವರು ಅಡ್ಡ ಬಂದರು 33) ಮೂರ್ಛೆಯಿಂದ ಎಚ್ಚೆತ್ತಾಗ ಶಾನುಭೋಗರು ಯಾವ ಸ್ಥಿತಿಯಲ್ಲಿದ್ದರು ? a) ಯಾವೊಂದು ಇಂದ್ರಿಯವೂ ಚುರುಕಾಗಿ ಕೆಲಸ ಮಾಡುತ್ತಿರಲಿಲ್ಲ b) ಮನಸ್ಸು ಅಸ್ಪಷ್ಟ ಸ್ಥಿತಿಯಲ್ಲಿತ್ತು c) ಕಣ್ಣೂ ಮಂಜು ಮಂಜು  d) ಮೇಲಿನ ಎಲ್ಲವೂ 34) ಶಾನುಭೋಗರನ್ನು ಮೂರ್ಛೆಯಿಂದ ಎಚ್ಚರಗೊಳಿಸಿದವರು ಯಾರು ? a) ಕೃಷಮೂರ್ತಿಯವರು b) ಎ ಎನ್‌ ಮೂರ್ತಿರಾಯರು c) ಗಾಡಿಯವರು d) ಹುಲಿ 35) ರೈತರ ಎತ್ತುಗಳು ಕಣಿ ಹಾಕಿಕೊಳ್ಳಲು ಕಾರಣವೇನು ? a) ಕತ್ತಲೆಯಲ್ಲಿ ದಾರಿ ಕಾಣದೆ b) ಹುಲಿಯ ಘರ್ಜನೆ ಕೇಳಿ c) ಶಾನುಭೋಗರು ಬಿದ್ದಿರುವುದನ್ನು ನೋಡಿ d) ಹಳ್ಳ ಅಡ್ಡ ಬಂದು 36) ಹುಲಿ ಕೋಪ ಮತ್ತು ನಿರಾಶೆಯಿಂದ ಮತ್ತೊಮ್ಮೆ ಘರ್ಜಿಸಿದ್ದೇಕೆ ? a) ಎತ್ತುಗಳ ಘಂಟೆ ಶಬ್ಧ ಕೇಳಿ b) ರೈತರ ಮಾತಿನ ಶಬ್ಧ ಕೇಳಿ c) ಎತ್ತುಗಳ ಘಂಟೆ ಶಬ್ಧ ಮತ್ತು ರೈತರ ಮಾತಿನ ಶಬ್ಧ ಕೇಳಿ d) ಶಾನುಭೋಗರಿಗೆ ಹೆದರಿ 37) ರೈತರು ಶಾನುಭೋಗರ ಬಳಿಗೆ ಬರುವಾಗ ಕೈಗೊಂಡ ಮುಂಜಾಗ್ರತಾ ಕ್ರಮಗಳನ್ನು ಕ್ರಮವಾಗಿ ಜೋಡಿಸಿ a) ಸ್ವಲ್ಪಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದರು.  b) ನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡಿದರು c) ತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಜಾಗರೂಕತೆಯಿಂದ ಮುಂದುವರಿದರು. d) ಮೇಲಿನ ಎಲ್ಲವೂ 38) ನಾನು ಮುಖ ಮೇಲಾಗಿ ಬಿದ್ದಿದ್ದೆನೆ ಎಂದು ಶಾನುಭೋಗರು ಯಾರನ್ನು ಕೇಳಿದರು? a) ರೈತರನ್ನು b) ಮನೆಯವರನ್ನು c) ಕೃಷ್ಣಮೂರ್ತಿಯವರನ್ನು d) ಹುಲಿಯನ್ನು 39) ಭಲೇ! ಎಂದು ಶಾನುಭೋಗರು ಯಾರನ್ನು ಪ್ರಶಂಶಿಸಿದರು? a) ಖರ್ದಿ ಪುಸ್ತಕವನ್ನು b) ರೈತರನ್ನು c) ಎತ್ತಗಳನ್ನು d) ಹುಲಿಯನ್ನು 40) ಕುಡಿದ ನೀರು ಅಲುಗದ ಹಾಗೆ ನುಡಿಗಟ್ಟಿನ ಅರ್ಥವೇನು? a) ಸ್ವಲ್ಲವೂ ಶ್ರಮ ಪಡದೆ b) ನೀರನ್ನೆ ಕುಡಿಯದೆ c) ಕುಡಿದ ನೀರನ್ನು ನುಂಗದೆ d) ದೇಹವನ್ನು ಅಲ್ಲಾಡಿಸದೆ 41) ಹುಲಿ ಈಗ ಎಷ್ಟು ಹಸಿದಿರಬೇಕು ಎಂಬ ಯೋಚನೆ ಶಾನುಭೋಗರಿಗೆ ಬಂದಾಗ ಅವರ ವದನಾರವಿಂದದಲಿ ಆದ ಬದಲಾವಣೆ ಏನು? a) ಕೋಪ b) ಆಶ್ಚರ್ಯ c) ಮುಗುಳುನಗೆ d) ದುಃಖ 42) ಶಾನುಭೋಗರ ಪ್ರಕಾರ ಅವರನ್ನು ರಕ್ಷಿಸಿದ್ದು ಯಾವುದು? a) ಖರ್ದಿ ಪುಸ್ತಕ b) ಹುಲಿಯ ಧರ್ಮಶ್ರದ್ಧೆ c) ರೈತರು d) ಎತ್ತುಗಳು 43) ಖಿರ್ದಿ ಪುಸ್ತಕ ಎಲ್ಲಿ ವಿಶ್ರಾಂತಿ ಪಡೆಯುತ್ತಿತ್ತು? a) ಪೆಟ್ಟಿಗೆಯಲ್ಲಿ b) ಚೀಲದಲ್ಲಿ c) ತೊಲೆಯಲ್ಲಿ d) ಶಾನುಭೋಗರ ಜೇಬಿನಲ್ಲಿ 44) ಶಾನುಭೋಗರು ನಿಜವಾಗಿ ಉಳಿದುದ್ದು ಯಾವುದರಿಂದ? a) ಖರ್ದಿ ಪುಸ್ತಕ b) ಹುಲಿಯ ಧರ್ಮಶ್ರದ್ಧೆ c) ರೈತರು d) ಎತ್ತುಗಳು 45) ನೆಲದಿಂದ ಮೇಲೆದ್ದು ಕೊಂಡಿದ್ದ ___ಎಡವಿ ಶಾನುಭೋಗರು ಬಿದ್ದರು a) ಗುಡ್ಡ b) ಮರದತುಂಡು c) ಕಲ್ಲು d) ಮರದ ಬೇರು 46) ರೈತರು ತಿಂಗಳ ಬೆಳಕಿನಲ್ಲಿ ___________________ ಹೊಡೆಯುತ್ತಿದ್ದರು a) ಗಾಡಿ b) ದನ c) ಗಾಣ d) ಎಮ್ಮೆ 47) ಗುಂಪಿಗೆ ಸೇರದ ಪದ ಗುರ್ತಿಸಿ a) ಹಗಲುಗನಸುಗಳು b) ಮಿನುಗುಮಿಂಚು c) ಚಿತ್ರಗಳು-ಪತ್ರಗಳು d) ಅಲೆಯಯವ ಮನ 48) ಗುಂಪಿಗೆ ಸೇರದ ಪದ ಗುರ್ತಿಸಿ a) ದೇವರು b) ಮಿನುಗುಮಿಂಚು c) ಹಗಲುಗನಸುಗಳು d) ಅಲೆಯುವಮನ 49) ಲಾಂಛನ ಪದದ ಅರ್ಥ a) ಹಡಗು b) ಮಚ್ಚು c) ಲಾಂಗು d) ಗುರುತು 50) ಶಾನುಭೋಗರ ಹಿರಿಯರು ಹೆಸರು ಪಡೆದಿದ್ದು ಇದಕ್ಕೆ a) ರಾಜಭಕ್ತಿಗೆ b) ಪ್ರಾಮಾಣಿಕತೆಗೆ c) ಹೆಚ್ಚು ಸೇವೆ ಮಾಡಿದ್ದಕ್ಕೆ d) ಹುಲಿ ಸಾಕಿದ್ದಕ್ಕೆ.

ವ್ಯಾಘ್ರಗೀತೆ - ರಸಪ್ರಶ್ನೆ

Tabela

Vizuelni stil

Postavke

Promeni šablon

Vrati automatski sačuvano: ?