1) ಕುವೆಂಪು ಅವರ ಪೂರ್ಣ ಹೆಸರು ಏನು? a) ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ. b) ಕುಪ್ಪಳ್ಳಿ ವೆಂಕಟೇಶ ಪುಟ್ಟಪ್ಪ. c) ಕುಪ್ಪೂರು ವೆಂಕಟಪ್ಪ ಪುಟ್ಟಪ್ಪ . d) ಕುಪ್ಪಳ್ಳಿ ವೆಂಕಣ್ಣಯ್ಯ ಪುಟ್ಟಪ್ಪ. 2) ಕುವೆಂಪು ಅವರು ಹುಟ್ಟಿದ ದಿನಾಂಕ ಯಾವುದು? a) ೨೯ ಡಿಸೆಂಬರ್ ೧೯೪೦ . b) ೨೮ ಡಿಸೆಂಬರ್ ೧೯೦೪. c) ೨೯ ಡಿಸೆಂಬರ್ ೧೯೦೪ . d) ೩೦ ಡಿಸೆಂಬರ್ ೧೯೪೦. 3) ಕುವೆಂಪು ಅವರ ಊರು ಯಾವುದು? a) ಶಿವಮೊಗ್ಗಜಿಲ್ಲೆಯ ಸೊರಬ ತಾ. ಕುಪ್ಪಳ್ಳಿ . b) ಶಿವಮೊಗ್ಗಜಿಲ್ಲೆಯ ಶಿಕಾರಿಪುರ ತಾ. ಕುಪ್ಪಳ್ಳಿ. c) ಶಿವಮೊಗ್ಗಜಿಲ್ಲೆಯ ಶಿವಪುರ ತಾ. ಕುಪ್ಪಳ್ಳಿ . d) ಶಿವಮೊಗ್ಗಜಿಲ್ಲೆಯ ಶಿಕಾರಿಪುರ ತಾ. ಕುಪ್ಪೂರು. 4) ಕುವೆಂಪು ಅವರು ರಚಿಸಿದ ಪ್ರಮುಖ ಕೃತಿಗಳು ಇವಾಗಿದೆ? a) ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ  b) ನನ್ನ ದೇವರು ಮತ್ತುಇತರ ಕಥೆಗಳು. c) ತಪೋನಂದನ, ರಸೋ ವೈಸ:  d) ಈ ಎಲ್ಲವೂ. 5) ಕುವೆಂಪು ಅವರ ಆತ್ಮಚರಿತ್ರೆ ಯಾವುದು? a) ನೆನಪಿನ ದೋ ಣಿಯಲ್ಲಿ . b) ತಪೋನಂದನ. c) ಮಲೆಗಳಲ್ಲಿಮದುಮಗಳು . d) ಅಣ್ಣನ ನೆನಪು. 6) ಕುವೆಂಪು ಅವರಿಗೆ ದೊರೆತ ಪ್ರಶಸ್ತಿ ಯಾವುದು? a) ಜ್ಞಾನಪೀಠ ಮತ್ತುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  b) ಪದ್ಮವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ. c) ಪಂಪ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ . d) ಈ ಎಲ್ಲವೂ. 7) ಕುವೆಂಪು ಅವರ `ಶ್ರೀ ರಾಮಾಯಣ ದರ್ಶನಂ' ಕೃತಿಗೆ ಲಭಿಸಿರುವ ಪ್ರಶಸ್ತಿ ಯಾವುದು? a) ಭಾರತೀಯ ಜ್ಞಾನಪೀಠ ಪ್ರಶಸ್ತಿ . b) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. c) ಪಂಪ ಪ್ರಶಸ್ತಿ . d) ಈ ಎಲ್ಲವೂ. 8) `ಹಸುರು' ಪದ್ಯವನ್ನು ಈ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ ? a) ಕೊಳಲು . b) ಪಾಂಚಜನ್ಯ. c) ಪಕ್ಷಿಕಾಶಿ . d) ಪ್ರೇಮಕಾಶ್ಮೀರ. 9) ಇದರಿಂದ ಕವಿಯ ಆತ್ಮ ಹಸುರಾಗಿದೆ? a) ಸಮುದ್ರದ ಹಸುರಿನಿಂದ . b) ಹಕ್ಕಿಗಳ ಇಂಪಿನಿಂದ. c) ಗಾಳಿಯ ತಂಪಿನಿಂದ . d) ರಸಪಾನ ಸ್ನಾನದಿಂದ. 10) ಕುವೆಂಪು ಅವರಿಗೆ ಪ್ರಕೃತಿ ಸೌಂದರ್ಯದ ರಸಾನುಭವವಾಗಿ "ಹಸುರು" ಕವನ ರಚನೆಗೆ ಪ್ರೇರಕವಾದ ಸ್ಥಳ ಯಾವುದು? a) ಮೈಸೂರಿನ ಉದಯರವಿ . b) ಸಿಬ್ಬಲು ಗುಡ್ಡ. c) ಕುಪ್ಪಳ್ಳಿಯ ಕವಿಶೈಲ . d) ಮಹಾಮಲೆಕಾನು. 11) `ಹಸುರು' ಕವನವು ಇದನ್ನು ಕಂಡು ಪ್ರೇರಿತವಾದ ಕವನವಾಗಿದೆ? a) ಆಶ್ವಯುಜ ಮಾಸದ ಪ್ರಕೃತಿಯ ಹಚ್ಚ ಹಸಿರು . b) ಆಶ್ವಯುಜ ಮಾಸದ ತೇಲಾಡುವ ಮೋಡ. c) ಆಶ್ವಯುಜ ಮಾಸದ ಹಸುರು ಹುಲ್ಲು . d) ಆಶ್ವಯುಜ ಮಾಸದ ಗಿಳಿಗಳ ಚಿಲಿಲಪಿಲಿನಾದ. 12) ಕವಿ ಕುವೆಂಪು ಅವರಿಗೆ ಸಂಜೆಯ ಬಿಸಿಲು ಈ ಬಣ್ಣವಾಗಿ ಕಂಡಿತು? a) ಹಸುರಾಗಿ . b) ಕೆಂಪಾಗಿ. c) ಹೊನ್ನಿನ ಬಣ್ಣವಾಗಿ . d) ಹೊಂಬೆಳಕಾಗಿ. 13) ಕವಿಗೆ ಹಸುರಾಗಿ ಕಂಡ ಪ್ರಕೃತಿಯ ಅಂಶಗಳು ಯಾವುವು? a) ಆಗಸ, ಮುಗಿಲು . b) ಗದ್ದೆಯ ಬಯಲು, ಮಲೆ. c) ಕಣಿವೆ, ಸಂಜೆಯ ಬಿಸಿಲು . d) ಈ ಎಲ್ಲವೂ. 14) ಆಶ್ವಯುಜದ ಭತ್ತದ ಗದ್ದೆಯ ಬಣ್ಣಈ ಹಸಿರಿನಂತಿದೆ? a) ಸಮುದ್ರದ ನೀಲದಂತೆ . b) ಗಿಳಿಯ ಹಸುರಿನಂತೆ. c) ಆಗಸದ ಹಸುರಿನಂತೆ . d) ಅಡಕೆಯ ತೋಟದ ಗೊನೆಯಂತೆ. 15) ಕವಿಯು ನೋಡಿದ ಅಡಕೆ ತೋಟ ಇಲ್ಲಿತ್ತು? a) ಬನದ ನಡುವೆ . b) ಗದ್ದೆಯ ಅಂಚಿನಲ್ಲಿ. c) ಹೊಲದ ಮಧ್ಯದಲ್ಲಿ . d) ಬನದಂಚಿನಲ್ಲಿ. 16) ಕವಿಗೆ ಹುಲ್ಲಿನ ಹಾಸು ಹೀಗೆ ಕಂಡಿತು? a) ಭೂಮಿತಾಯಿಯ ಕಿರೀಟದಂತೆ . b) ಮಕಮಲ್ಲಿನ ರತ್ನಗಂಬಳಿಯಂತೆ. c) ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆಯಂತೆ . d) ಮಕಮಲ್ಲಿನ ಕಡುಗೆಂಪಿನ ಜಮಖಾನೆಯಂತೆ. 17) ಕವಿ ಬೇರೆ ಬಣ್ಣವನ್ನೇ ಕಾಣದಂತಾಗಲು ಕಾರಣವೇನು? a) ಮುಂಜಾನೆಯ ಮಂಜು ಹಸುರಾಗಿ ದಟ್ಟವಾಗಿದ್ದರಿಂದ. . b) ಭೂಮಿಯು ಸಂಪೂರ್ಣವಾಗಿ ಹಸುರುಮಯವಾಗಿದ್ದರಿಂದ. c) ಭೂಮಿಯು ಹೆಚ್ಚು ಸಮುದ್ರದಿಂದ ಆವರಿಸಿದ್ದರಿಂದ. . d) ಭೂಮಿಯು ತಂಗಾಳಿ ಮತ್ತುಹುಲ್ಲಿನಿಂದ ಆವರಿಸಿದ್ದರಿಂದ.. 18) ಕವಿಯ ಮೂಗಿಗೆ ಹಸುರಿನ ಅನುಭವ ನೀಡಿದ್ದು ಯಾವುದು? a) ಗಿಳಿಗಳ ಚಿಲಿಪಿಲಿ . b) ಹೂವಿನ ಕಂಪು. c) ಅಡಕೆಯ ತೋಟದ ಸುವಾಸನೆ . d) ಗಾಳಿಯ ತಂಪು. 19) ಕವಿಯ ಕಿವಿಗೆ ಹಸುರಿನ ಅನುಭವ ನೀಡಿದ್ದು ಯಾವುದು? a) ಎಲರಿನ ತಂಪು . b) ಗಿಳಿಗಳ ಹಸುರು. c) ಹಕ್ಕಿಯ ಕೊರಳಿನ ಇಂಪು . d) ಸಮುದ್ರದ ಅಲೆಗಳು. 20) ಕುವೆಂಪುರವರು ಪ್ರಕೃತಿಯಲ್ಲಿಹೆಪ್ಪುಗಟ್ಟಿದ ಹಚ್ಚ ಹಸುರನ್ನು ಕಂಡ ಸಮಯ ಯಾವುದು? a) ಆಶ್ವಯುಜ ಮಾಸದ ಏಕಾದಶಿಯ ದಿನ. b) ಆಶ್ವಯುಜ ಮಾಸದ ಅಷ್ಟಮಿರಾತ್ರಿ ದಿನ. c) ಆಶ್ವಯುಜ ಮಾಸದ ಪಂಚಮಿಯ ದಿನ . d) ಆಶ್ವಯುಜ ಮಾಸದ ನವರಾತ್ರಿ ದಿನ.

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ 10 ಪದ್ಯಪಾಠ 5 ಹಸುರು

Leaderboard

Visual style

Options

Switch template

Continue editing: ?