1) ಎ.ಎನ್.ಮೂರ್ತಿರಾವ್ ಅವರ ಹುಟ್ಟೂರು ಯಾವುದು? a) ಮೈಸೂರು ಜಿಲ್ಲೆಯ ಹೆಬ್ಬಾಳು. b) ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು. c) ಹಾಸನ ಜಿಲ್ಲೆಯ ಅರೆಹಳ್ಳಿ. d) ತುಮಕೂರು ಜಿಲ್ಲೆಯ ಅಂಕನಹಳ್ಳಿ. 2) `ವ್ಯಾಘ್ರಗೀತೆ' ಗದ್ಯದ ಆಕರ ಕೃತಿ ಯಾವುದು? a) ಹಗಲುಗನಸುಗಳು .. b) ಅಲೆಯುವ ಮನ.. c) ಚಿತ್ರಗಳು ಪತ್ರಗಳು .. d) ಸಮಗ್ರ ಲಲಿತ ಪ್ರಬಂಧಗಳು.. 3) `ಘ್ರಾಣೇಂದ್ರಿಯ' ಎಂದರೆ ಅರ್ಥವೇನು? a) ಕಣ್ಣು . b) ನಾಲಿಗೆ. c) ಮೂಗು. d) ಕಿವಿ. 4) ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವ ದೊಂಬರಾಟದಲ್ಲಿ ಶಾನು ಭೋಗರಿಗೆ ಏನಾಯಿತು? a) ಕಣ್ಣಿಗೆ ಕತ್ತಲಾಯಿತು . b) ಕಾಲು ನೋ ವು ಬಂದಿತು. c) ತಲೆ ಸುತ್ತಲಾರಂಭಿಸಿತು . d) ಎದೆ ನೋವು ಉಂಟಾಯಿತು. 5) ಶಾನುಭೋಗರು ಯಾವ ಕಣಿವೆಯನ್ನು ದಾಟಿ ತಮ್ಮ ಊರಿಗೆ ಹೋಗಬೇಕಿತ್ತು? a) ಮದಲಿಂಗನ ಕಣಿವೆ. b) ಮಲ್ಲನ ಕಣಿವೆ. c) ಕುಣಿಗಲ್ ಕಣಿವೆ . d) ದೇವರಾಯನ ದುರ್ಗದ ಕಣಿವೆ. 6) ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದು? a) ಖಜಾನೆ . b) ಖಿರ್ದಿ ಪುಸ್ತಕ. c) ಇರಸಾಲು. d) ರೈತರ ಮಸಿ ಕಾಣಿಕೆ. 7) ಮರಹತ್ತಲು ಓಡಿ ಹೋಗುತ್ತಿದ್ದಶಾನುಭೋಗರು ಬೀಳಲು ಕಾರಣವೇನು? a) ಕಲ್ಲು . b) ಮರದ ಮೊಳಕು. c) ಖಿರ್ದಿ ಪುಸ್ತಕ . d) ಹುಲಿಯ ಏಟು. 8) ಶಾನುಭೋಗರು ತಮ್ಮ ವಂಶದ ಕೀರ್ತಿಗೆ ಕುಂದುತರದಂತೆ ನಿಷ್ಠೆಯಿಂದ ಕಾಪಾಡಿಕೊಂಡು ಬಂದಿದ್ದು ಏನನ್ನು? a) ರೈತರ ಕಾಣಿಕೆಯನ್ನು . b) ಶಾನುಭೋ ಗಿಕೆ. c) ಖಿರ್ದಿ ಪುಸ್ತಕವನ್ನು . d) ಕಂದಾಯವನ್ನು. 9) ಶಾನುಭೋಗರು ಚಿಕ್ಕನಾಯಕನ ಹಳ್ಳಿಗೆ ಹೋಗಲು ಕಾರಣವೇನು? a) ಇರಸಾಲಿಗಾಗಿ . b) ಕಂದಾಯ ವಸೂಲಿಗಾಗಿ. c) ದಿನಸಿ ತರುವುದಕ್ಕಾಗಿ . d) ಖಜಾನೆಯಲ್ಲಿಹಣ ತರಲು. 10) "ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ" ಎಂದು ಬರೆದ ಕವಿಯ ವಿಷಯದಲ್ಲಿ ಲೇಖಕರಿಗೆ ಇದ್ದ ಅಭಿಪ್ರಾಯವೇನು? a) ಬಹಳ ಪ್ರೀತಿ . b) ಬಹಳ ತಿರಸ್ಕಾರ. c) ಬಹಳ ವಿರೋ ಧ . d) ಬಹಳ ಗೌರವ. 11) ಲೇಖಕರಿಗೆ ವ್ಯಾಘ್ರಗೀತೆಯ ಕಥೆ ಹೇಳಿದವರು ಯಾರು? a) ಶಾನುಭೋಗರು. b) ಕೃಷ್ಣಮೂರ್ತಿಯವರು. c) ಶಾನುಭೋಗರ ಮಗ . d) ಕೃಷ್ಣಮೂರ್ತಿಯವರ ಮೊಮ್ಮಗ. 12) ಶಾನುಭೋಗರಿಗೆ ಹುಲಿಯು ಬಂದದ್ದು ಹೇಗೆ ತಿಳಿಯಿತು? a) ಹುಲಿಯ ಘರ್ಜನೆ . b) ಪಂಚೇಂದ್ರಿಯ. c) ಆರನೆಯ ಇಂದ್ರಿಯ. d) ಹುಲಿಯ ಹೆಜ್ಜೆಯ ಸದ್ದು. 13) ಹುಲಿಯು ಆಕ್ರಮಣ ಮಾಡಲು ಮುಂದಕ್ಕೆ ನೆಗೆಯುವಷ್ಟರಲ್ಲಿ ಬೆನ್ನು ತೋರಿಸಿ ನಡೆಯುತ್ತಿದ್ದ ಶಾನು ಭೋಗರನ್ನು ನೋಡಿದ ಹುಲಿಯ ಮನಸ್ಥಿತಿ ಹೇಗಿತ್ತು? a) ಕೋಪ ಬಂದಿತು . b) ಮೆಚ್ಚಿಗೆಯಾಯಿತು. c) ನಗು ಬಂದಿತು . d) ಬೇಸರವಾಯಿತು.. 14) "ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ" ಎಂದು ಆಹ್ವಾನ ನೀಡಿದ್ದುಯಾರು? a) ಹುಲಿ . b) ಗೋ ಪಾಲಕ. c) ಕರು . d) ಪುಣ್ಯಕೋಟಿ. 15) ಸದ್ವಂಶದಲ್ಲಿ ಹುಟ್ಟಿದ ಆ ಹುಲಿ ತಾನು ಅಧರ್ಮಕ್ಕೆ ಕೈ ಹಾಕಬಾರದೆಂದು ಯೋಚಿಸಿದಾಗ ಅದಕ್ಕೆ ನೆನಪಾದ ಬೈಬಲ್‌ ನುಡಿ ಏನು? a) ಸೈತಾನ ಹಿಂದಿರುಗು . b) ಕರ್ತನೇ ಹಿಂದಿರುಗು. c) ನಿನ್ನ ಶತ್ರುಗಳನ್ನೂ ಪ್ರೀತಿಸು . d) ಕರ್ತನೇ ದಯೆ ತೋ ರು. 16) "ಸ್ವಧರ್ಮೇ ನಿಧನಂ ಶ್ರೇಯಃ" ಈ ವಾಕ್ಯವನ್ನು ಹೊಂದಿರುವ ಗ್ರಂಥ ಯಾವುದು? a) ಉಪನಿಷತ್ತು . b) ಋಗ್ವೇದ. c) ಭಗವದ್ಗೀತೆ . d) ವಿಷ್ಣುಪುರಾಣ. 17) ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳಲು ಶಾನುಭೋಗರು ಈ ರೀತಿ ತಿರುಗುತ್ತಿದ್ದರೆಂದು ವರ್ಣಿಸಲಾಗಿದೆ ? a) ಗಾಣದೆತ್ತಿನಂತೆ . b) ಕುಲಾಲ ಚಕ್ರದಂತೆ. c) ಗಾಡಿಯ ಚಕ್ರದಂತೆ . d) ಕುಂಬಾರನಂತೆ. 18) ಶಾನುಭೋಗರು ಖಿರ್ದಿಪುಸ್ತಕವನ್ನು ಹೀಗೆ ನಿಷ್ಠೆಯಿಂದ ಕಾಪಾಡಿಕೊಂಡು ಬಂದಿದ್ದರು? a) ವಂಶದ ಹೆಸರು ನಶಿಸುವಂತೆ . b) ವಂಶದ ಕೀರ್ತಿ ಕ್ಷೀಣಿಸುವಂತೆ. c) ವಂಶದ ಕೀರ್ತಿ ಹೆಚ್ಚುವಂತೆ . d) ವಂಶದ ಕೀರ್ತಿಗೆ ಕುಂದು ತರದಂತೆ. 19) ಶಾನುಭೋಗರು ಸ್ವಲ್ಪ ದೊಡ್ಡಹೆಜ್ಜೆಹಾಕಿದರೆ ಯಾವ ಸಮಯಕ್ಕೆ ಮನೆ ಸೇರುತ್ತಿದ್ದರು? a) ಊಟದ ಹೊತ್ತಿಗೆ . b) ಮಲಗುವ ಹೊತ್ತಿಗೆ. c) ಬೆಳಕಾಗುವ ಹೊತ್ತಿಗೆ . d) ಕತ್ತಲಾಗುವ ಹೊತ್ತಿಗೆ. 20) ನಿದ್ದೆಯಿಂದ ಎಚ್ಚೆತ್ತಹುಲಿ ಏನೆಂದು ಚಿಂತಿಸಿತು? a) ಹೊಟ್ಟೆ ಬರಿದಾಗಿದೆ . b) ವಿಧಿ ಆಹಾರಕ್ಕೆ ಏನು ಒದಗಿಸುವುದೋ. c) ಶಾನುಭೋ ಗರ ದುಂಡು ದುಂಡಾದ ಶರೀರ.  d) ಕೋವಿಯ ಶಬ್ದ.

SSLC ವಾರ್ಷಿಕ ಪರೀಕ್ಷೆ - ಪೂರ್ವ ಸಿದ್ಧತೆ ರಸಪ್ರಶ್ನೆ ೧೨ (ಗದ್ಯಪಾಠ ೬ ವ್ಯಾಘ್ರಗೀತೆ)

Leaderboard

Visual style

Options

Switch template

Continue editing: ?