1) ತೆಗೆದುತ್ತರೀಯಮಂ’ ಪದವು ಈ ಸಂದಿಗೆ ಉದಾಹರಣೆಯಾಗಿದೆ. a) ಲೋಪ ಸಂಧಿ b) ಶ್ಚುತ್ವ ಸಂಧಿ. c) ಗುಣ ಸಂಧಿ. d) ಆಗಮ ಸಂಧಿ. 2) ಕಳ್ಗುಡಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ a) ಸವರ್ಣದೀರ್ಘ ಸಂಧಿ b) ಆಗಮ ಸಂಧಿ. c) ಜಸ್ತ್ವ ಸಂಧಿ. d) ಆದೇಶ ಸಂಧಿ. 3) ಕಡುವೆಳ್ಪು’ ಪದವು ಈ ಸಂಧಿಗೆ ಉದಾರಣೆ a) ಲೋಪ ಸಂಧಿ b) ಆದೇಶ ಸಂಧಿ. c) ಆಗಮ ಸಂಧಿ. d) ಗುಣಸಂಧಿ. 4) ಕನ್ನಡದ ಸ್ವರ ಸಂಧಿಗಳು a) ಲೋಪ ಸಂಧಿ – ಆಗಮ ಸಂಧಿ b) ಲೋಪ ಸಂಧಿ – ಆದೇಶ ಸಂಧಿ. c) ಸವರ್ಣದೀರ್ಘ ಸಂಧಿ – ಗುಣ ಸಂಧಿ. d) ಯಣ್ ಸಂಧಿ – ಅನುನಾಸಿಕ ಸಂಧಿ. 5) ಆಗಮ ಸಂಧಿಗೆ ಉದಾಹರಣೆಗಳು a) ಮಾತಂತು- ಬಂದಲ್ಲದೆ b) ಇರುಳಳಿದು – ಸೂರ್ಯೋದಯ. c) ವೇದಿಯಲ್ಲಿ – ಮಗುವಿಗೆ. d) ಬೆಟ್ಟದಾವರೆ – ಗಿರೀಶ. 6) ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡಿಕೊಳ್ಳುವುದು a) ಸಮಾಸ b) ಸಂಧಿ. c) ಕೃದಂತ. d) ನಾಮಪದ. 7) ಸವರ್ಣದೀರ್ಘ ಸಂಧಿಯ ಪದ a) ವಾಚನಾಲಯ b) ಓಣಿಯಲ್ಲಿ. c) ಇಂಚರ. d) ಜ್ಞಾನೇಶ್ವರ. 8) ಚರಿಸುತದ್ವರದ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ a) ಅನುನಾಸಿಕ ಸಂಧಿ b) ವೃದ್ಧಿ ಸಂಧಿ. c) ಆದೇಶ ಸಂಧಿ. d) ಲೋಪ ಸಂಧಿ. 9) ಆದೇಶ ಸಂಧಿ ಪದ ‘ಪೋಗಲ್ವೇಳ್ಕುಂ’ ಬಿಡಿಸಿದಾಗ a) ಪೋಗಲ್ + ಏಳ್ಕುಂ b) ಪೋಗಲ್ + ಪೇಳ್ಕುಂ. c) ಪೋಗಲ್ + ವೇಳ್ಕುಂ. d) ಪೋಗಲಿ + ಈಳ್ಕುಂ. 10) ಲೇಖನವನೋದಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ a) ಗುಣಸಂಧಿ b) ಸವರ್ಣದೀರ್ಘ ಸಂಧಿ. c) ಆದೇಶ ಸಂಧಿ. d) ಲೋಪ ಸಂಧಿ. 11) ಲೋಪಸಂಧಿಗೆ ಉದಾಹರಣೆಗಳು a) ನಿಮ್ಮರಸ – ಒಮ್ಮೊಮ್ಮೆ b) ಓಣಿಯಲ್ಲಿ – ವೇದಿಯಲ್ಲಿ. c) ಕಂಗೆಟ್ಟು + ಹೊಸಗಾಲ. d) ಷಣ್ಮುಖ + ಸನ್ಮಾನ. 12) ಯಣ್ ಸಂಧಿ ಪದವಾದ ‘ಕೋಟ್ಯಧೀಶ್ವರ’ ಪದವನ್ನು ಬಿಡಿಸಿದಾಗ a) ಕೋಟಿ + ಅಧೀಶ್ವರ b) ಕೋಟ + ಆದೀಶ್ವರ. c) ಕೋಟ್ಯಧೀಶ + ಈಶ್ವರ. d) ಕೋಟ್ಯ + ಧೀಶ್ವರ. 13) ಅಬ್ಧಿ : ಜಶ್ತ್ವಸಂಧಿ : : ಉನ್ಮಾದ : ____________ a) ಗುಣಸಂಧಿ b) ಆದೇಶ ಸಂಧಿ. c) ಅನುನಾಸಿಕ ಸಂಧಿ. d) ಶ್ಚುತ್ವಸಂಧಿ. 14) ವಲ್ಕಲಾವೃತ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ a) ಸವರ್ಣದೀರ್ಘ ಸಂಧಿ b) ಲೋಪ ಸಂಧಿ. c) ವೃದ್ಧಿ ಸಂಧಿ. d) ಗುಣಸಂಧಿ. 15) ಸನ್ಮಂಗಳ’ ಪದವನ್ನು ಬಿಡಿಸಿ ಬರೆದಾಗ a) ಸನ್ + ಮಂಗಳ b) ಸತ್ + ಮಂಗಳ. c) ಸನ್ + ಅಮಂಗಳ. d) ಸಮ + ಅಂಗಳ. 16) ಮತಂಗಾಶ್ರಮ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ a) ಯಣ್ ಸಂಧಿ b) ಶ್ಚುತ್ವ ಸಂಧಿ. c) ಸವರ್ಣದೀರ್ಘ ಸಂಧಿ. d) ಆಗಮ ಸಂಧಿ. 17) ತಲೆಕೂದಲು ಬೆಳ್ಳಗಾದ ಮುದುಕಿ – ಈ ವಾಕ್ಯದಲ್ಲಿನ ತಲೆಗೂದಲು ಪದವು ಈ ಸಂಧಿಗೆ ಉದಾಹರಣೆ a) ಲೋಪ ಸಂಧಿ b) ಆಗಮ ಸಂಧಿ. c) ಗುಣ ಸಂಧಿ. d) ಆದೇಶ ಸಂಧಿ. 18) ವನೌಷಧಿ : ವೃದ್ಧಿ ಸಂಧಿ : : ಷಣ್ಮುಖ : ___________ a) ಯಣ್ ಸಂಧಿ b) ಗುಣಸಂಧಿ. c) ಆದೇಶ ಸಂಧಿ. d) ಅನುನಾಸಿಕ ಸಂಧಿ. 19) ವಾಙ್ಮಯ : ಅನುನಾಸಿಕ ಸಂಧಿ : : ಜನೈಕ್ಯ :____________ a) ಜಶ್ತ್ವ ಸಂಧಿ b) ಗುಣಸಂಧಿ. c) ವೃದ್ಧಿ ಸಂಧಿ. d) ಆದೇಶ ಸಂಧಿ. 20) ಜಗಜ್ಯೋತಿ : ಶ್ಚುತ್ವ ಸಂಧಿ : : ಅಜಂತ :____________ a) ಲೋಪ ಸಂಧಿ b) ಜಶ್ತ್ವ ಸಂಧಿ. c) ಆದೇಶ ಸಂಧಿ. d) ವೃದ್ಧಿ ಸಂಧಿ.

ಕನ್ನಡ ವ್ಯಾಕರಣ - ರಸಪ್ರಶ್ನಾ ಸರಣಿ ಭಾಗ 2 - ಸಂಧಿಗಳು

Leaderboard

Visual style

Options

Switch template

Continue editing: ?